ಕರ್ನಾಟಕ ರಾಜ್ಯ ಪದವೀಧರ ಸಂಘ (ಮಹಾಮಂಡಳ)
ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪದವೀಧರರಲ್ಲಿ ಕರ್ನಾಟಕ ರಾಜ್ಯ ಪದವೀಧರ ಸಂಘ (ಮಹಾಮಂಡಳ)ವು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮನವಿ ಮಾಡುತ್ತಿದೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನ ನಮ್ಮ ದೇಶದ ಅಮೂಲ್ಯ ಆಧಾರಸ್ತಂಭಗಳು. ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ಮತದಾರನಿಗೂ ದೊರೆತಿರುವ ಮಹತ್ವದ ಪ್ರಜಾಸತ್ತಾತ್ಮಕ ಹಕ್ಕು. ಆದ್ದರಿಂದ ಪದವೀಧರ ಮತದಾರರು ಅಭ್ಯರ್ಥಿಗಳ ಹಿನ್ನೆಲೆ, ಸಾರ್ವಜನಿಕ ಸೇವೆ, ನಿಲುವುಗಳು ಹಾಗೂ ಲಭ್ಯವಿರುವ ಅಧಿಕೃತ ಮಾಹಿತಿಯನ್ನು ಪರಿಶೀಲಿಸಿ ತಮ್ಮ ಸ್ವಂತ ವಿವೇಚನೆಯ ಆಧಾರದಲ್ಲಿ ಮತದಾನದ ನಿರ್ಧಾರ ಕೈಗೊಳ್ಳುವುದು ಮುಖ್ಯವಾಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅರ್ಹತೆ ಮತ್ತು ಅನರ್ಹತೆಗಳಿಗೆ ಸಂವಿಧಾನ ಹಾಗೂ Representation of the People Act, 1951 ಅಡಿಯಲ್ಲಿ ನಿಯಮಗಳಿವೆ. ಉದಾಹರಣೆಗೆ, ಕೆಲವು ಸರ್ಕಾರಿ ಲಾಭದಾಯಕ ಹುದ್ದೆಗಳನ್ನು ಹೊಂದಿರುವುದು ಅನರ್ಹತೆಗೆ ಕಾರಣವಾಗಬಹುದು; ಕೆಲವು ಅಪರಾಧಗಳಲ್ಲಿ ಶಿಕ್ಷೆಗೆ ಒಳಗಾದವರಿಗೂ ಕಾನೂನಿನಡಿ ಅನರ್ಹತೆ ಅನ್ವಯಿಸಬಹುದು.
ಅದೇ ರೀತಿ, ಅಭ್ಯರ್ಥಿಗಳು ಸಲ್ಲಿಸುವ ಅಫಿಡವಿಟ್ಗಳಲ್ಲಿ ಅವರ ಹಿನ್ನೆಲೆಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರು ಪರಿಶೀಲಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಅಭ್ಯರ್ಥಿಗಳ ನಾಮಪತ್ರ ಮತ್ತು ಅಫಿಡವಿಟ್ ಮಾಹಿತಿಯನ್ನು ECI Candidate Affidavit Portal ಮೂಲಕ ವೀಕ್ಷಿಸಬಹುದು.
ಚುನಾವಣಾ ಆಯೋಗದ Candidate Affidavit Portal
ನೂರಾರು ವರ್ಷಗಳ ಸ್ವಾತಂತ್ರ್ಯ ಹೋರಾಟದ ನಂತರ ಭಾರತಕ್ಕೆ ದೊರೆತ ಪ್ರಜಾಪ್ರಭುತ್ವ ವ್ಯವಸ್ಥೆಯು ಸಮಾಜದ ವಿವಿಧ ವರ್ಗಗಳ ಜನರಿಗೆ ವಿಧಾನಸಭೆ, ವಿಧಾನ ಪರಿಷತ್, ಸಂಸತ್ತು ಸೇರಿದಂತೆ ಸಾರ್ವಜನಿಕ ಪ್ರತಿನಿಧಿತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿದೆ.
ಈ ಹಿನ್ನೆಲೆಯಲ್ಲಿ ಮುಂಬರುವ ಪದವೀಧರ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪದವೀಧರರು ಚುನಾವಣಾ ಪ್ರಕ್ರಿಯೆಯಲ್ಲಿ ಜಾಗೃತಿಯಿಂದ ಭಾಗವಹಿಸಿ, ಅಭ್ಯರ್ಥಿಗಳ ಕುರಿತು ಲಭ್ಯವಿರುವ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಸ್ವಂತ ನಿರ್ಧಾರ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪದವೀಧರ ಸಂಘ (ಮಹಾಮಂಡಳ) ಮನವಿ ಮಾಡುತ್ತದೆ.
ಪದವೀಧರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಕುರಿತು ಆರೋಗ್ಯಕರ ಚರ್ಚೆಗೆ ಕೈಜೋಡಿಸಬೇಕೆಂದು ವಿನಂತಿ.
ತಮ್ಮ ನಂಬಿಗೆಯ,
ಶ್ರೀ ಮಲ್ಲಿಕಾರ್ಜುನ ಗಂಗಾಧರ
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಪದವೀಧರ ಸಂಘ (ಮಹಾಮಂಡಳ)
ಧಾರವಾಡ | ಹಾವೇರಿ | ಗದಗ | ಉತ್ತರ ಕನ್ನಡ
ಸಂಪರ್ಕ: 9449416747