ಓ ನನ್ನ ಜನಪ್ರತಿನಿಧಿಗಳೇ, ಒಂದಿಷ್ಟು ಕೇಳಿ. ನಿಮಗೆ 15 ನಿಮಿಷ ಕಾಲಾವಕಾಶವಿದೆಯೇ?

ನಮಗಾಗಿ ನೀಡುವ ನಿಮ್ಮ 15 ನಿಮಿಷಗಳ ಸಮಯ ನಮ್ಮ ಕುಟುಂಬದ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ನೀವು ಮಧ್ಯಮ ಪಂಥದ ತತ್ವಗಳನ್ನು ಬಿಡಬೇಕು, ನಮಗೆ ಬದುಕಲು ದಾರಿ ಮಾಡಿಕೊಡಬೇಕು. ನಾವು ಕೂಲಿ ಮಾಡುವವರು, ಕಟ್ಟಿಗೆ ಕಡೆಯುವವರು, ಹಮಾಲಿ ಮಾಡುವವರು, ನೀರು ಹಾಯಿಸುವವರು, ಮನೆ ತೊಳೆಯುವವರು — ನಾವು ನಿಮ್ಮ ಸೇವಕರು, ನಾವು ಭಾರತೀಯರು.

ದೇಶದಲ್ಲಿ ಅಂದಾಜು 30 ಕೋಟಿ ಕುಟುಂಬಗಳಿವೆ. ಅದರಲ್ಲಿ ನಮ್ಮ ಕುಟುಂಬಗಳು ಐದು ಕೋಟಿ ಇವೆ. ನಮಗೆ ದುಡಿಯಲು ಭೂಮಿ ಕಡಿಮೆ, ಖಾಸಗಿ ನೌಕರಿ ಇಲ್ಲ, ಸರ್ಕಾರಿ ನೌಕರಿ ಇಲ್ಲವೇ ಇಲ್ಲ. ನಮ್ಮ ಕುಟುಂಬಕ್ಕೆ ಶಾಶ್ವತವಾದ ಆದಾಯದ ಮೂಲಗಳಿಲ್ಲ.

ರಾಜಕಾರಣಿಗಳೇ, ಅಧಿಕಾರಿಗಳೇ, ಸಾಹುಕಾರರೇ, ಸಂಪತ್ತುಳ್ಳವರೇ — ನೀವೆಲ್ಲ ನಮ್ಮನ್ನು ನಿಮ್ಮ ಗುಲಾಮರನ್ನಾಗಿ ಮಾಡಿಕೊಂಡಿದ್ದೀರಿ. ಕಳೆದ 77 ವರ್ಷಗಳಿಂದ ನಮ್ಮ ಪೂರ್ವಜರು, ನಮ್ಮ ತಂದೆ-ತಾಯಿ, ಇಂದು ನಾವು ನಿಮ್ಮ ಸೇವಕರಾಗಿ, ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ.

ನಾವು ಎಲ್ಲ ಜಾತಿಗಳಲ್ಲಿದ್ದೇವೆ, ಧರ್ಮಗಳಲ್ಲಿದ್ದೇವೆ, ಪಂಗಡಗಳಲ್ಲಿದ್ದೇವೆ. ನಮ್ಮ ಮನೆಯಲ್ಲಿ ಜಾತಿಗಳಿಲ್ಲ, ದ್ವೇಷ ಬೆಳೆಸುವಂತಿಲ್ಲ. ನಾವೆಲ್ಲ ಭಾರತೀಯರು, ಒಂದೇ ತಾಯಿಯ ಮಕ್ಕಳು. ಹಾಗಾದರೆ ಜನಪ್ರತಿನಿಧಿಗಳೇ, ನೀವು ಭಾರತದ ಮಕ್ಕಳಲ್ಲವೇ? ಸಂವಿಧಾನದ ಪ್ರಕಾರ ನೀವು ಆಯ್ಕೆಯಾಗಿಲ್ಲವೇ?

ಹಾಗಾದರೆ ನಮಗೆ ನೀಡುವ ರೇಷನ್‌ನಲ್ಲಿಯೂ ನಿಮಗೆ ಕಮಿಷನ್, ನಮ್ಮ ಮಕ್ಕಳ ಊಟದಲ್ಲಿಯೂ ನಿಮಗೆ ಕಮಿಷನ್? ಆ ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ. ಅರ್ಥಮಾಡಿ — ನಾವೇನು ತಪ್ಪು ಮಾಡಿದ್ದೇವೆ? ನಮ್ಮಿಂದ ಕಮಿಷನ್ ಪಡೆಯುವ ನೀವು ಹೃದಯವಿಲ್ಲವೇ?

ನೀವು ನೀಡುವ ಅಕ್ಕಿ, ಸೈಕಲ್ ಆಸೆ, ಅಮೂಲ್ಯವಾದ ವಸ್ತುಗಳನ್ನು ನೀಡಿ ನಮ್ಮನ್ನು ದಾರಿ ತಪ್ಪಿಸುತ್ತಿದ್ದೀರಿ. ಅಷ್ಟು ಕೂಡ ನಿಮಗೆ ಮಾನವೀಯತೆ ಇಲ್ಲವೇ? ಕೆಲವು ಇಲಾಖೆಗಳನ್ನು ನಿಮ್ಮ ಮನೆಯ ಖಾಸಗಿ ಆಸ್ತಿಯಂತೆ ಮಾಡಿಕೊಂಡಿದ್ದೀರಿ.

ಜನಪ್ರತಿನಿಧಿಗಳೇ, ಒಂದು ಬಾರಿ ತಿರುಗಿ ನೋಡಿ — ಮತ ಚಲಾಯಿಸುವವರು ದಡ್ಡರಲ್ಲ. ನಮಗೆ ಅವಕಾಶಗಳಿಲ್ಲ. ನಾವು ನೀವು ನೀಡುವ ಹಣ, ಒಡವೆ, ವಸ್ತುಗಳನ್ನು ಸ್ವೀಕರಿಸಿದ್ದು ಸತ್ಯ. ಕಾರಣ — ನಿರುದ್ಯೋಗ.

ಆದರೆ ಇತ್ತೀಚೆಗೆ ಜನಪ್ರತಿನಿಧಿಗಳು ಮಾಡುವ ದುರಹಂಕಾರ ಹೆಚ್ಚಾಗಿದೆ. ಕೆಲವು ಇಲಾಖೆಗಳನ್ನು ಹಾಗೂ ಅಧಿಕಾರಿಗಳನ್ನು ನಿಮ್ಮ ಮನೆಯ ಜೀತದಳವಾಗಿ ಮಾಡಿಕೊಂಡಿದ್ದೀರಿ. ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾನವೀಯ ಮೌಲ್ಯವನ್ನು ಕಳೆದುಕೊಂಡು, ರಾಜಕಾರಣಿ ಹೇಳಿದಂತೆ ಕೇಳುವ ಸರ್ಕಸ್ಸಿನ ಗೊಂಬೆಗಳಾಗಿದ್ದಾರೆ. ಯಾವುದೇ ಪೊಲೀಸ್ ಇಲಾಖೆಯಲ್ಲಿ ನ್ಯಾಯ ಸಿಗಬೇಕಾದರೆ ಜನಪ್ರತಿನಿಧಿಯರ ಕಾರಪಾರವೇ ಬೇಕಾಗಿದೆ.

ಇದೇ ರೀತಿ ಕಂದಾಯ ಇಲಾಖೆಯ ಪರಿಸ್ಥಿತಿಯೂ ಹಾಗೆಯೇ ಇದೆ. ಚುನಾವಣೆ ಬಂದಾಗ ನಮ್ಮನ್ನು ಪ್ರೀತಿಸುತ್ತೀರಿ, ನಮಗೆ ದುಡ್ಡು ಕೊಡುತ್ತೀರಿ, ಆರತಿಯಲ್ಲಿ ಹಣ ಇಡುತ್ತೀರಿ, ಬಾಡೂಟ ನೀಡಿ ನಮ್ಮನ್ನು ನಿಮ್ಮ ಬುಟ್ಟಿಯಲ್ಲಿ ಹಾಕಿಕೊಳ್ಳುತ್ತೀರಿ. ಚುನಾವಣೆ ಮುಗಿದ ನಂತರ ನಮ್ಮನ್ನು ಭಿಕಾರಿಗಳನ್ನಾಗಿ ಮಾಡುತ್ತೀರಿ.

ನಮ್ಮ ಮಕ್ಕಳು ನಮ್ಮ ಸ್ವಂತ ಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆ ಕಲಿಯದಂತೆ ನೋಡಿಕೊಳ್ಳುವುದು ಎಷ್ಟು ಸರಿ? ಇತ್ತೀಚೆಗೆ ನಮ್ಮ ರಾಜ್ಯ ಸರ್ಕಾರ ಹಿಂದಿಯ ಮೇಲೆ ಇರುವ ವ್ಯಾಮೋಹವನ್ನು ತೊಡೆದು ಹಾಕಿದರೆ — ಅಂದರೆ ನಾವು ನಮ್ಮ ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೆ ಹೋಗಬಾರದೇ? ನಮಗೆ ಹಿಂದಿ ಅವಶ್ಯವಾಗಿ ಬೇಕೇ ಬೇಕು. ಅದರ ಜೊತೆ ಇಂಗ್ಲೀಷ್ ಕೂಡ ಅವಶ್ಯವಾಗಿದೆ. ಆಗ ಮಾತ್ರ ದೇಶದ ಸಂವಿಧಾನದ ಗ್ರಂಥಗಳನ್ನು ಓದಲು ಸಾಧ್ಯವಾಗುತ್ತದೆ.

ಸಮಾನತೆ ಎಡೆಗೆ ಸಾಗಬೇಕಾದ ನಮ್ಮ ದೇಶ ಅಸಮಾನತೆ ಎಡೆಗೆ ಸಾಗುತ್ತಿದೆ. ಎದ್ದೇಳಿ ಭಾರತೀಯರೇ, ಒಮ್ಮೆ ಕಣ್ಣೆತ್ತಿ ನೋಡಿ — ಶ್ರೀಮಂತ ದೇಶದಲ್ಲಿ ಬಡವರು ಹೇಗೆ ಬದುಕುತ್ತಾರೆ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಲಕ್ಷ ಕೋಟಿಗಳ ಬಜೆಟ್ ಇದೆ. ಅದರ ಸ್ವಲ್ಪ ಭಾಗವನ್ನು ನಮ್ಮ ನಿರುದ್ಯೋಗಿ ಪದವಿಧರರಿಗಾಗಿ ಮೀಸಲಿಟ್ಟರೆ ಸ್ವಾರ್ಥತೆ ಆಗುವುದಿಲ್ಲವೆಂದು ನಮ್ಮ ಅಭಿಪ್ರಾಯ.

ಬಾಬಾ ಸಾಹೇಬ್ ಅಂಬೇಡ್ಕರ್ ಬಲಿಷ್ಠ ಮತ್ತು ಸಮಾನತೆ ಸಾರುವ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ನಮ್ಮ ಕುಟುಂಬಗಳು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇವೆ. ನಮಗೆ ಜಾತಿ-ಧರ್ಮಕ್ಕಿಂತ ದೇಶ ಮುಖ್ಯ.

ಪರದೇಶಕ್ಕೆ ಹೋದಾಗ “ನೀವು ಯಾರು?” ಎಂದು ಕೇಳಿದರೆ ನಾವು “ಭಾರತೀಯರು” ಎಂದು ಹೇಳುತ್ತೇವೆ. ಅದೇ ದೇಶದ ಒಳಗೆ “ನೀವು ಯಾರು?” ಎಂದು ಕೇಳಿದರೆ ನಾವು ಹಿಂದುಗಳು, ಕ್ರೈಸ್ತರು, ಮುಸ್ಲಿಮರು, ಬೌದ್ಧರು, ಪಾರ್ಸಿಗಳು ಎಂದು ಹೇಳುತ್ತೇವೆ. ಇಷ್ಟೊಂದು ಜಾತೀಯತೆ ಬೇಕೇ?

ನಾವೆಲ್ಲ ಒಂದು ಎಂಬ ಭಾವನೆ ಬರುವುದು ಯಾವಾಗ? ಜಾತಿ-ಧರ್ಮ ನಮ್ಮ ಮನೆಯಲ್ಲಿದ್ದರೂ, ಹೊರಗೆ ಬಂದ ನಂತರ ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದು ಎನ್ನುವ ಮನೋಭಾವನೆ ನಮ್ಮಲ್ಲಿ ಬರಬೇಕು.

ಕರ್ನಾಟಕ ಪದವೀಧರ ಮಹಾಸಂಘ
ಅಧ್ಯಕ್ಷರು
ಶ್ರೀ ಮಲ್ಲಿಕಾರ್ಜುನ ಗಂಗಾಧರ