ಶ್ರೀ ಮಲ್ಲಿಕಾರ್ಜುನ ಸಿ. ಗಂಗಾಧರ್ ಸರ್ ಅವರ ಸಮಾಜಮುಖಿ ಸೇವೆ – ಪದವೀಧರರ ಆಶಾಕಿರಣ

ಶರಣು ಶರಣಾರ್ಥಿಗಳು

ನಮ್ಮ ಅಥಣಿಯ ಶ್ರೀ ಗುರು ಕಾಡು ಸಿದ್ದೇಶ್ವರ ಆಶ್ರಮದ ಸದ್ಭಕ್ತರಾದ ಶ್ರೀ ಮಲ್ಲಿಕಾರ್ಜುನ ಸಿ. ಗಂಗಾಧರ್ ಸರ್ ಅವರು ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಳಿಯನ್ನು ಸ್ಥಾಪಿಸಿ ಕಳೆದ 20 ವರ್ಷಗಳಿಂದ ಹಗಲು-ರಾತ್ರಿ ಎನ್ನದೆ ಪದವೀಧರರ ಹಿತಕ್ಕಾಗಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ.

ಶಿಕ್ಷಣ ಪ್ರೇಮಿಗಳಾದ ಅವರು ಶ್ರೀ ಮುರುಗೇಂದ್ರ ಶಿವಯೋಗಿ ವೀರಶೈವ ವಿದ್ಯಾಪೀಠ ಹಾಗೂ ವಿವಿಧ ಸಮಾಜಮುಖಿ ಸಂಸ್ಥೆಗಳನ್ನು ಸ್ಥಾಪಿಸಿ, ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ವಿಶೇಷವಾಗಿ ಅಂಗವಿಕಲರು, ನಿರ್ಗತಿಕರು ಹಾಗೂ ಬಡ ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಸಹಾಯ-ಸಹಕಾರಗಳನ್ನು ಒದಗಿಸುವ ಮೂಲಕ ಸಮಾಜ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಪದವೀಧರರ ಕನಸುಗಳನ್ನು ನನಸು ಮಾಡುವ ಸಾಮರ್ಥ್ಯ ಮತ್ತು ದೂರದೃಷ್ಟಿಯನ್ನು ಹೊಂದಿರುವ ಗಂಗಾಧರ್ ಸರ್ ಅವರು, ಪದವೀಧರರಿಗೆ ಇನ್ನಷ್ಟು ಉತ್ತಮ ಅವಕಾಶಗಳು ದೊರಕಬೇಕು ಎಂಬ ಉದ್ದೇಶದಿಂದ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮುಂದುವರಿಸುತ್ತಿದ್ದಾರೆ. ಅವರ ಸೇವಾ ಮನೋಭಾವ, ದಿಟ್ಟ ಹೋರಾಟ ಮತ್ತು ಪದವೀಧರರ ಅಭಿವೃದ್ಧಿಗಾಗಿ ಮಾಡುತ್ತಿರುವ ಶ್ರಮ ನಿಜವಾಗಿಯೂ ಶ್ಲಾಘನೀಯವಾಗಿದೆ.

ಪದವೀಧರರ ಹಿತಾಸಕ್ತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ತಮಗೆ, ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಳಿಯ ಆಶಯಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ಒದಗಿ ಬರಲಿ ಎಂದು ಹೃತ್ಪೂರ್ವಕವಾಗಿ ಶುಭ ಹಾರೈಸುತ್ತೇವೆ.

ಸಮಾಜ ಸೇವೆ, ಶಿಕ್ಷಣ ಅಭಿವೃದ್ಧಿ ಹಾಗೂ ಪದವೀಧರರ ಸಬಲೀಕರಣಕ್ಕಾಗಿ ತಾವು ಕೈಗೊಂಡಿರುವ ಕಾರ್ಯಗಳು ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಪ್ರಾರ್ಥಿಸುತ್ತೇವೆ.

– ಪ. ಪೂ. ಡಾ. ಕಾಡಯ್ಯಸ್ವಾಮೀಜಿ (ಸ್ವಯಂ ಮೇವ ಧೀರ)
ಅಖಿಲ ಭಾರತ ಹಿಂದೂ ಮಹಾಸಭಾ
ಕರ್ನಾಟಕ ರಾಜ್ಯ ಉಪಾಧ್ಯಕ್ಷರು

Leave a Reply

Your email address will not be published. Required fields are marked *